

2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚು ಪಡೆದ ಪ್ಯಾರಾ ಈಜುಗಾರ ಪ್ರಶಾಂತ್ ಕರ್ಮಾಕರ್ ಅವರನ್ನು ಮೂರು ವರ್ಷಗಳಿಗೆ ಭಾರತದ ಪ್ಯಾರಾಲಿಂಪಿಕ್ಸ್ ಸಮಿತಿಯು ಅಮಾನತು ಮಾಡಿದೆ.
ಮಹಿಳಾ ಈಜುಪಟುಗಳ ವಿಡಿಯೋ ರೆಕಾರ್ಡ್ ಮಾಡಿದ ಹಿನ್ನಲೆಯಲ್ಲಿ ಅಮಾನತು ಮಾಡಲಾಗಿದೆ.
ಭಾರತದ ಪರ ಹಲವಾರು ಪದಕಗಳನ್ನು ಗೆದ್ದಿರುವ ಪ್ರಶಾಂತ್ ಕೋಚ್ ಆಗಿ ನೇಮಕ ಗೊಂಡಿದ್ದರು. ಮಹಿಳಾ ಕ್ರಿಡಾಪಟುಗಳ ವಿಡಿಯೋ ರೆಕಾರ್ಡ್ ಅಳಿಸಿಹಾಕುವಂತೆ ಪೋಷಕರು ಮಾಡಿರುವ ಮನವಿಯ ತಿರಸ್ಕರಿಸಿರುವ ಕರ್ಮಾಕರ್ ರನ್ನು ಭಾರತದ ಪ್ಯಾರಾಲಿಂಪಿಕ್ಸ್ ಸಮಿತಿಯು ಅಮಾನತು ಮಾಡಿ ಶಿಸ್ತು ಕ್ರಮ ಕೈಗೊಂಡಿದೆ.
ಮೂರು ವರ್ಷಗಳ ಕಾಲ ಅಮಾನತು ಮುಂದುವರಿಯಲಿದೆ,